Widgets Magazine

ಪುತ್ರನ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ: ದೂರು ನೀಡಿದ ಸಚಿನ್ ತೆಂಡುಲ್ಕರ್

ಮುಂಬೈ| Krishnaveni K| Last Modified ಗುರುವಾರ, 28 ನವೆಂಬರ್ 2019 (09:06 IST)
ಮುಂಬೈ: ಪುತ್ರ ಅರ್ಜುನ್ ತೆಂಡುಲ್ಕರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯೊಂದನ್ನು ಸೃಷ್ಟಿಸಿ ಆಕ್ಷೇಪಾರ್ಹ ಟ್ವೀಟ್ ಮಾಡುತ್ತಿದ್ದ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಫೇಕ್ ರಿಪೋರ್ಟ್ ಮಾಡಿದ್ದಾರೆ.

 
ಜ್ಯೂನಿಯರ್ ತೆಂಡುಲ್ಕರ್ ಎಂಬ ಹೆಸರಿನಲ್ಲಿ ಅರ್ಜುನ್ ರ ನಕಲಿ ಖಾತೆ ಸೃಷ್ಟಿಸಿದ್ದ ಖಾತೆದಾರರು, ಆಕ್ಷೇಪಾರ್ಹ ಟ್ವೀಟ್ ಗಳನ್ನು ಮಾಡಿ ಪುತ್ರ ಮತ್ತು ತಮ್ಮ ಹೆಸರಿಗೆ ಕಳಂಕ ತರಲು ಯತ್ನಿಸಿದ್ದಕ್ಕೆ ಸಚಿನ್ ಟ್ವಿಟರ್ ಇಂಡಿಯಾಗೆ ಟ್ವೀಟ್ ಮಾಡಿ ಖಾತೆ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
 
‘ನನ್ನ ಪುತ್ರ ಅರ್ಜುನ್ ಅಥವಾ ಸಾರಾ ಟ್ವಿಟರ್ ಖಾತೆಯನ್ನು ಹೊಂದಿಲ್ಲ. ಆದರೆ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಆಕ್ಷೇಪಾರ್ಹ ಟ್ವೀಟ್ ಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಕೂಡಲೇ ಟ್ವಿಟರ್ ಇಂಡಿಯಾ ಕ್ರಮ ಕೈಗೊಳ್ಳಿ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :