ಮುಂಬೈ: ಕ್ರಿಕೆಟ್ ದೇವರು ಎಂದೇ ಪರಿಗಣಿತವಾಗಿರುವ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ತವರು ಮುಂಬೈನ ವಾಂಖೆಡೆ ಮೈದಾನದಲ್ಲಿ ಸೂಕ್ತ ಗೌರವ ಸಲ್ಲಿಸಲು ತೀರ್ಮಾನಿಸಲಾಗಿದೆ.ಸಚಿನ್ ತೆಂಡುಲ್ಕರ್ ಪ್ರತಿಮೆಯನ್ನು ವಾಂಖೆಡೆ ಮೈದಾನದಲ್ಲಿ ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿದೆ. ಇದನ್ನು ಏಷ್ರಿಲ್ 24 ರಂದು ಸಚಿನ್ ತೆಂಡುಲ್ಕರ್ ಹುಟ್ಟುಹಬ್ಬದ ದಿನ ಅಥವಾ ಇದೇ ವರ್ಷ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿ ವೇಳೆ ಅನಾವರಣಗೊಳಿಸಲಾಗುತ್ತದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ ತೆಂಡುಲ್ಕರ್, ‘ನನ್ನ ವೃತ್ತಿ ಜೀವನ ಆರಂಭವಾಗಿದ್ದು ಇಲ್ಲಿಂದ. ನಾನು ವಿಶ್ವಕಪ್