ಮುಂಬೈ: ಇಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂಗ್ಲೆಂಡ್ ಬೆಂಬಲಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ.ಅರೇ.. ಇದ್ಯಾಕೆ ಹೀಗೆ? ಸಚಿನ್ ಗೆ ತಮ್ಮ ದೇಶವನ್ನು ಬಿಟ್ಟು ಎದುರಾಳಿ ತಂಡದ ಮೇಲೆ ಯಾಕಿಷ್ಟು ವ್ಯಾಮೋಹ ಬೆಳೆಯಿತು ಎಂದು ನಿಮಗೆ ಅಚ್ಚರಿಯಾಗಬಹುದು. ಅಸಲಿಗೆ ಸಚಿನ್ ಇಂಗ್ಲೆಂಡ್ ಬೆಂಬಲಿಸಿದ್ದು ನಿಜ. ಆದರೆ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನಲ್ಲ.