ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಿವೃತ್ತರಾಗಿ ಇಷ್ಟು ಸಮಯವೇ ಆದರೂ ಇದುವರೆಗೆ ಸಕ್ರಿಯ ಕ್ರಿಕೆಟ್ ನಿಂದ ದೂರವೇ ಇದ್ದಾರೆ. ಇದೀಗ ಅವರು ಬಿಸಿಸಿಐನ ಪ್ರಮುಖ ಹುದ್ದೆಯೊಂದನ್ನು ವಹಿಸಿಕೊಳ್ಳುವ ಬಗ್ಗೆ ಅಧ್ಯಕ್ಷ ಸೌರವ್ ಗಂಗೂಲಿ ಸುಳಿವು ನೀಡಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡುವಾಗ ಗಂಗೂಲಿ ಸಚಿನ್ ಬಿಸಿಸಿಐಗೆ ಎಂಟ್ರಿ ಕೊಡುವ ಬಗ್ಗೆ ಮಾತನಾಡಿದ್ದಾರೆ. ಮುಂದೆ ಅವರನ್ನು ಪ್ರಮುಖ ಹುದ್ದೆಯಲ್ಲಿ ನೋಡಬಹುದು ಎಂದಿದ್ದಾರೆ.‘ಈಗ ಏನೇ ಹುದ್ದೆ ವಹಿಸಿಕೊಳ್ಳುವುದಿದ್ದರೂ ಸ್ವಹಿತಾಸಕ್ತಿ ದೂರು ದಾಖಲಾಗುತ್ತದೆ. ಬೇಕೆಂದೇ ಈ ವಿವಾದ