ಮುಂಬೈ: ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಹುದ್ದೆಯಿಂದ ಇತ್ತೀಚೆಗಷ್ಟೇ ವಜಾಗೊಂಡಿದ್ದ ಸಂಜಯ್ ಬಂಗಾರ್ ಇದಕ್ಕೂ ಮೊದಲು ಬಿಸಿಸಿಐ ಆಯ್ಕೆ ಸಮಿತಿ ಜತೆ ಕಿತ್ತಾಡಿದ್ದರು ಎಂಬ ಅಂಶವನ್ನು ಆಂಗ್ಲ ಮಾಧ್ಯಮವೊಂದು ಹೊರ ಹಾಕಿದೆ. ಬಂಗಾರ್ ಸಹಾಯಕ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದಾಗ ಆಯ್ಕೆ ಸಮಿತಿ ಸದಸ್ಯ ದೇವಾಂಗ್ ಗಾಂಧಿ ಕೊಠಡಿಗೆ ತೆರಳಿ ಕಿತ್ತಾಡಿದ್ದರಂತೆ. ನನ್ನನ್ನು ಕೋಚ್ ಸ್ಥಾನದಿಂದ ಕಿತ್ತು ಹಾಕಿದರೆ ಚೆನ್ನಾಗಿರಲ್ಲ. ಮುಂದೊಂದು ದಿನ ತನ್ನ ಬಳಿ ಮತ್ತೆ ಕೋಚ್ ಆಗಿ