ಪುಣೆ: ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಹೊರಗಿನವರ ಮಾತಿಗೆ ಕಿವಿಗೊಡಲ್ಲ ಎಂದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ತಿರುಗೇಟು ನೀಡಿದ್ದಾರೆ.ರಾಹುಲ್ ಫಾರ್ಮ್ ಬಗ್ಗೆ ಮಾತನಾಡಿರುವ ಕೊಹ್ಲಿ ‘ಮಾತನಾಡುವುದು ಜನರ ಚಾಳಿ. ಹೊರಗಿನವರ ಮಾತಿಗೆ ಕಿವಿಗೊಡಲ್ಲ. ಫಾರ್ಮ್ ನಲ್ಲಿಲ್ಲದ ಆಟಗಾರರಿಗೆ ನಮ್ಮ ಬೆಂಬಲ ಮುಂದುವರಿಯುತ್ತದೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಜಯ್ ಮಂಜ್ರೇಕರ್ ಕೊಹ್ಲಿ, ಧೋನಿಯಂತೆ ಟೀಕೆಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಬೇಕು