Widgets Magazine

ದ.ಆಫ್ರಿಕಾ ಕ್ರಿಕೆಟಿಗನ ಕ್ಷಮೆ ಕೇಳಿದ ಪಾಕ್ ನಾಯಕ ಸರ್ಫರಾಜ್ ಅಹಮ್ಮದ್

ದುಬೈ| Krishnaveni K| Last Modified ಗುರುವಾರ, 24 ಜನವರಿ 2019 (09:49 IST)
ದುಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ದ.ಆಫ್ರಿಕಾ ಕ್ರಿಕೆಟಿಗನ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.

 
ದ.ಆಫ್ರಿಕಾ ಆಲ್ ರೌಂಡರ್ ಆಂಡೈಲ್ ಫೆಲುಕ್ವಾಯೊರನ್ನು ‘ಕರಿಯ’ ಎಂದು ನಿಂದಿಸಿದ್ದರು. ಇದು ವಿವಾದಕ್ಕೀಡಾಗಿತ್ತು. ಈ ರೀತಿ ಜನಾಂಗೀಯ ನಿಂದನೆ ಮಾಡಿದ ತಪ್ಪಿಗೆ ಸರ್ಫರಾಜ್ ಅಹಮ್ಮದ್ ಸಾಕಷ್ಟು ಟೀಕೆಗೊಳಗಾಗಿದ್ದರು.
 
ಪಾಕಿಸ್ತಾನ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಈ ಬಗ್ಗೆ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದು, ನಾನು ಘಟನೆ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :