Widgets Magazine

ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಪಾಕ್ ನಾಯಕ ಸರ್ಫರಾಜ್ ಅಹಮ್ಮದ್

ಇಸ್ಲಾಮಾಬಾದ್| Krishnaveni K| Last Modified ಮಂಗಳವಾರ, 23 ಏಪ್ರಿಲ್ 2019 (07:36 IST)
ಇಸ್ಲಾಮಾಬಾದ್: ವಿಶ್ವಕಪ್ ಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನಲೆಯಲ್ಲಿ ಎಲ್ಲಾ ತಂಡಗಳು ಜಿದ್ದಾಜಿದ್ದಿನ ಹಣಾಹಣಿಗೆ ತಯಾರಾಗುತ್ತಿದೆ.
 
ಇದೀಗ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಆಡಬೇಕೋ ಬೇಡವೋ ಎಂದು ಭಾರತ ಗೊಂದಲದಲ್ಲಿರುವಾಗಲೇ ಪಾಕ್ ನಾಯಕ ಸರ್ಫ್ರರಾಜ್ ಅಹಮ್ಮದ್ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
 
‘ನಾಯಕನಾಗಿ ನಾವು ಎಲ್ಲಾ ತಂಡಗಳೊಂದಿಗೆ ಆಡಿ ಗೆಲ್ಲಲು ಬಯಸುತ್ತೇವೆ. ಅದಕ್ಕೆ ಭಾರತವೂ ಹೊರತಲ್ಲ. ನಾವು ಅಫ್ಘಾನಿಸ್ತಾನದ ಜತೆ ಆಡುವ ಹಾಗೇ ಭಾರತದ ಜತೆಗೂ ಆಡುತ್ತೇವೆ. ಭಾರತದ ವಿರುದ್ಧ ಎಲ್ಲಾ ತಂಡಗಳು ಗೆಲ್ಲಲು ಬಯಸುತ್ತವೆ. ಹಾಗೇ ನಾವೂ ಭಾರತ ಮಾತ್ರವಲ್ಲ ಎಲ್ಲಾ ತಂಡಗಳ ವಿರುದ್ಧವೂ ಗೆದ್ದು ವಿಶ್ವಕಪ್ ಗೆಲ್ಲುತ್ತೇವೆ’ ಎಂದು ಸರ್ಫ್ರಾಜ್ ಅಹಮ್ಮದ್ ಹೇಳಿದ್ದಾರೆ.
 
ವಿಶ್ವಕಪ್ ನಲ್ಲಿ ಇದುವರೆಗೆ ಭಾರತ ವಿರುದ್ಧ ಗೆದ್ದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸರ್ಫ್ರಾಜ್ ‘ಇದುವರೆಗೆ ಸೋಲಿಸಿಲ್ಲ. ಆದರೆ ಇತ್ತೀಚೆಗೆ ದೊಡ್ಡ ಐಸಿಸಿ ಈವೆಂಟ್ ನಲ್ಲಿ ಅವರನ್ನು ನಾವು ಸೋಲಿಸಿದ್ದೆವು ಎಂಬುದನ್ನು ಮರೆಯಬಾರದು’ ಎಂದು ಪಾಕ್ ನಾಯಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       
ಇದರಲ್ಲಿ ಇನ್ನಷ್ಟು ಓದಿ :