ಸೌರವ್ ಗಂಗೂಲಿ, ಅಮಿತ್ ಶಾ ಪುತ್ರ ಜಯ್ ಶಾ ಭವಿಷ್ಯ ನಿರ್ಧರಿಸಲಿರುವ ಸುಪ್ರೀಂ ಕೋರ್ಟ್

ನವದೆಹಲಿ| Krishnaveni K| Last Modified ಬುಧವಾರ, 9 ಡಿಸೆಂಬರ್ 2020 (11:08 IST)
ನವದೆಹಲಿ: ಬಿಸಿಸಿಐನಲ್ಲಿ ತಮ್ಮ ಅಧಿಕಾರಾವಧಿ ವಿಸ್ತರಿಸಲು ನಿಯಮಾವಳಿಗಳ ತಿದ್ದುಪಡಿಗೆ ಅವಕಾಶ ಕೋರುವಂತೆ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಗೃಹಸಚಿವ ಅಮಿತ್ ಶಾ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ.

 
ಗಂಗೂಲಿ, ಜಯ್ ಶಾ ಸಲ್ಲಿಸಿದ್ದ ಅರ್ಜಿಯನ್ನು ಜುಲೈನಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇದೀಗ ಮತ್ತೆ ಬಿಸಿಸಿಐ ಈ ವಿಚಾರವನ್ನು ವಿಚಾರಣೆ ನಡೆಸಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿ ಗಂಗೂಲಿ, ಜಯ್ ಶಾ ಕಾರ್ಯಾವಧಿ ಹೆಚ್ಚಿಸಲು ಅವಕಾಶ ನೀಡಬೇಕೇ ಅಥವಾ ಮೂಲ ನಿಯಮವನ್ನೇ ಮುಂದುವರಿಸುವ ಮೂಲಕ ಗಂಗೂಲಿ ಅಧಿಕಾರವಾಧಿ ಕೊನೆಗೊಳಿಸಬೇಕೇ ಎಂಬ ಬಗ್ಗೆ ತೀರ್ಮಾನ ಮಾಡಲಿದೆ.
ಇದರಲ್ಲಿ ಇನ್ನಷ್ಟು ಓದಿ :