ಮುಂಬೈ: ಐಪಿಎಲ್ ಪಂದ್ಯದ ಬ್ಯುಸಿ ಶೆಡ್ಯೂಲ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಬಾಂಬ್ ಭೀತಿ ಎದುರಾಗಿ ಆತಂಕ ಮೂಡಿಸಿತು.ಆದರೆ ಈ ಬಗ್ಗೆ ತನಿಖೆ ಮಾಡಿರುವ ಪೊಲೀಸರು ಇದೊಂದು ಸುಳ್ಳು ಸುದ್ದಿ ಎಂದು ಪತ್ತೆಮಾಡಿದ್ದಾರೆ. ವಾಂಖೆಡೆ ಮೈದಾನದಲ್ಲಿ ಭದ್ರತೆಗೆ ಲೋಪವಾಗುವಂತಹ ಘಟನೆಗಳು ನಡೆಯಲಿವೆ ಎಂಬ ಸುದ್ದಿ ಹಬ್ಬಿತ್ತು.ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಅಲ್ಲದೆ, ವಾಂಖೆಡೆ ಮೈದಾನ ಸುರಕ್ಷಿತವಾಗಿದೆ ಎಂದಿದ್ದಾರೆ. ಭದ್ರತೆ ಅಪಾಯದ ಬಗ್ಗೆ ಗುಪ್ತಚರ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲ.