ನವದೆಹಲಿ: ರಾಷ್ಟ್ರೀಯ ಉದ್ದೀಪನಾ ಔಷಧಿ ನಿರೋಧಕ ಪ್ರಾಧಿಕಾರ (ನಾಡಾ) ಸದಸ್ಯರಾಗಿದ್ದೂ ಸಭೆಗೆ ಹಾಜರಾಗದ ಬಗ್ಗೆ ವಿವಾದವಾಗುತ್ತಿದ್ದಂತೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ.ನಾಡಾ ಸಭೆಗೆ ಆಗಮಿಸದ ಬಗ್ಗೆ ಬಂದ ಟೀಕೆಗಳಿಗೆ ಉತ್ತರಿಸಿರುವ ಸೆಹ್ವಾಗ್ ನನಗೆ ಈ ಹುದ್ದೆ ಸ್ವೀಕರಿಸುವುದೇ ಇಷ್ಟವಿರಲಿಲ್ಲ. ನನ್ನ ಪ್ರಕಾರ ಒಲಿಂಪಿಕ್ ಆಟಗಾರರು ಮಾತ್ರ ಈ ಸಮಿತಿಗೆ ಸದಸ್ಯರಾಗಬೇಕೇ ಹೊರತು ಕ್ರಿಕೆಟಿಗರಲ್ಲ. ಹಾಗಿದ್ದರೂ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಒತ್ತಾಯಕ್ಕೆ ಹುದ್ದೆ ಒಪ್ಪಿಕೊಂಡೆ ಎಂದು ಸ್ಪಷ್ಟನೆ