ನ್ಯೂಜಿಲೆಂಡ್ ಪ್ರವಾಸಗೈದ ಪಾಕ್ ಕ್ರಿಕೆಟ್ ತಂಡದಲ್ಲಿ ಸಾಲು ಸಾಲು ಕೊರೋನಾ ಕೇಸ್

ಕರಾಚಿ| Krishnaveni K| Last Modified ಶನಿವಾರ, 28 ನವೆಂಬರ್ 2020 (11:05 IST)
ಕರಾಚಿ: ನ್ಯೂಜಿಲೆಂಡ್ ಪ್ರವಾಸಗೈದ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಈಗ ಕೊರೋನಾ ಭೀತಿ ಆವರಿಸಿದೆ. ಒಟ್ಟು ಏಳು ಕ್ರಿಕೆಟಿಗರು ಕೊರೋನಾ ಸೋಂಕಿಗೊಳಗಾಗಿದ್ದಾರೆ.

 
ಒಟ್ಟು 53 ಮಂದಿ ಸದಸ್ಯರ ತಂಡ ನ್ಯೂಜಿಲೆಂಡ್ ಪ್ರವಾಸ ಮಾಡಿತ್ತು. ಈ ಪೈಕಿ ಆರು ಮಂದಿಗೆ ಕೊರೋನಾ ಇರುವುದು ನಿನ್ನೆಯೇ ದೃಢಪಟ್ಟಿತ್ತು. ಇಂದು ಮತ್ತೋರ್ವ ಕ್ರಿಕೆಟಿಗ ಸೋಂಕಿಗೊಳಗಾಗಿರುವುದು ಕನ್ ಫರ್ಮ್ ಆಗಿದೆ. ಜೈವಿಕ ಸುರಕ್ಷಾ ನಿಯಮಗಳನ್ನು ಮುರಿದು ಬೇಕಾಬಿಟ್ಟಿಯಾಗಿ ತಿರುಗಾಡಿದ್ದರಿಂದಲೇ ಸೋಂಕು ತಗುಲಿದೆ ಎಂಬ ಮಾತು ಕೇಳಿಬರುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :