ಕರಾಚಿ: ಅವರಾಗಿಯೇ ಆಹ್ವಾನವಿತ್ತರೂ ಐಪಿಎಲ್ ನಲ್ಲಿ ಆಡಲ್ಲ, ಅದಕ್ಕಿಂತ ದೊಡ್ಡ ಟೂರ್ನಮೆಂಟ್ ಪಾಕಿಸ್ತಾನ ಕ್ರಿಕೆಟ್ ಲೀಗ್ ಎಂದು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೊಂಡಿದ್ದಾರೆ.ಕಾಶ್ಮೀರ ವಿಚಾರದಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿ ಭಾರತೀಯ ಕ್ರಿಕೆಟಿಗರಿಂದ ಜಾಡಿಸಿಕೊಂಡ ಬಳಿಕ ಅಫ್ರಿದಿ ಈ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಮುಂದೊಂದು ದಿನ ಪಾಕ್ ಕ್ರಿಕೆಟ್ ಲೀಗ್, ಐಪಿಎಲ್ ನನ್ನೂ ಮೀರಿಸಲಿದೆ ಎಂದು ಅಫ್ರಿದಿ ಹೊಗಳಿಕೊಂಡಿದ್ದಾರೆ.ಕಾಶ್ಮೀರ ವಿಚಾರದಲ್ಲಿ ಟ್ವೀಟ್ ಮಾಡಿ ಟೀಕೆಗೊಳಗಾಗಿದ್ದರ ಬಗ್ಗೆ ತಾನು ತಲೆಕೆಡಿಸಿಕೊಂಡಿಲ್ಲ.