1996ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲಿ ಶತಕ ಸಿಡಿಸಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ನಿವೃತ್ತಿ ಬಳಿಕವೂ ಅದೇ ಖದರ್ ಉಳಿಸಿಕೊಂಡಿದ್ದಾರೆ. ಕೌಂಟಿ ಪಂದ್ಯವೊಂದರಲ್ಲಿ ಅಫ್ರಿದಿ 42 ಎಸೆತಗಳಲ್ಲಿ 101 ರನ್ ಸಿಡಿಸಿದ್ದಾರೆ. ಬ್ರಿಟನ್ನಿನ ಡರ್ಬಿಯಲ್ಲಿ ನಡೆದ ನಾಟ್ ವೆಸ್ಟ್ ಟಿ-20 ಟೂರ್ನಿಯ ಡರ್ಬಿ ಶೇರ್ ವಿರುದ್ಧದ ಪಂದ್ಯದಲ್ಲಿ ಹ್ಯಾಂಪ್ ಶೇರ್ ತಂಡದ ಆಟಗಾರ ಶಾಹೀದ್ ಅಫ್ರಿದಿ ಈ ಸಾಧನೆ ಮಾಡಿದ್ದಾರೆ. ಅಫ್ರಿದಿ ಶತಕದ ನೆರವಿನಿಂದ ತಂಡ