ಐಪಿಎಲ್: ಫೈನಲ್ ಪಂದ್ಯಕ್ಕೆಂದು ಟಿಕೆಟ್ ಬುಕ್ ಮಾಡಿದ್ದ ಕೆಕೆಆರ್ ಮಾಲಿಕ ಶಾರುಖ್ ಖಾನ್!

ನವದೆಹಲಿ, ಭಾನುವಾರ, 27 ಮೇ 2018 (09:31 IST)

ನವದೆಹಲಿ: ಈ ಬಾರಿಯ ಐಪಿಎಲ್ ಫೈನಲ್ ಪಂದ್ಯಕ್ಕೆ ತಮ್ಮ ಕೋಲ್ಕೊತ್ತಾ ನೈಟ್ ರೈಡರ್ಸ್ ಬಂದೇ ಬರುತ್ತದೆಂಬ ಭರವಸೆಯಲ್ಲಿದ್ದ ಮಾಲಿಕ, ನಟ ಶಾರುಖ್ ಖಾನ್ ಈಗಾಗಲೇ ವಿಮಾನ ಟಿಕೆಟ್ ಕೂಡಾ ಬುಕ್ ಮಾಡಿದ್ದರಂತೆ.
 
ಆದರೆ ಆಗಿದ್ದೇ ಇನ್ನೊಂದು. ಕೆಕೆಆರ್ ಸೆಮಿಫೈನಲ್ ನಲ್ಲಿ ಹೈದರಾಬಾದ್ ವಿರುದ್ಧ ಮುಗ್ಗರಿಸಿತು. ಇದರಿಂದಾಗಿ ಶಾರುಖ್ ಇದೀಗ ಫೈನಲ್ ಗೆ ಹೋಗುವ ಮೂಡ್ ನಲ್ಲಿ ಇಲ್ಲ. ಟಿಕೆಟ್ ರದ್ದು ಮಾಡುತ್ತೇನೆಂದು ಶಾರುಖ್ ಹೇಳಿಕೊಂಡಿದ್ದಾರೆ. ಅದರ ಜತೆಗೆ ತಮ್ಮ ತಂಡಕ್ಕೆ ಧನ್ಯವಾದವನ್ನೂ ತಿಳಿಸಿದ್ದಾರೆ.
 
‘ಇಷ್ಟು ದಿನ ಮನರಂಜಿಸಿದ್ದಕ್ಕಾಗಿ ಧನ್ಯವಾದಗಳು. ಎಲ್ಲರೂ ಚೆನ್ನಾಗಿ ಆಡಿದ್ದೀರಿ. ನಾನು ನಗುತ್ತಲೇ ಇರುತ್ತೇನೆ’ ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಕೆಆರ್ ಆಟಗಾರ ಕ್ರಿಸ್ ಲಿನ್ ನಿಮ್ಮಂಥಾ ಮಾಲಿಕ ನಮಗೆ ಸಿಕ್ಕಿರುವುದೇ ಸೌಭಾಗ್ಯ. ನಮಗಾಗಿ ಎರಡು ತಿಂಗಳು ಮೀಸಲಿಟ್ಟಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಸನ್ ರೈಸರ್ಸ್ ಹೈದರಾಬಾದ್ ಗೆ ಫೈನಲ್ ದಾರಿ ತೋರಿದ ರಶೀದ್ ಖಾನ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಹೈದರಾಬಾದ್: ಬಹುಶಃ ರಶೀದ್ ಖಾನ್ ಆಲ್ ರೌಂಡರ್ ಪ್ರದರ್ಶನ ನೀಡದೇ ಹೋಗಿರುತ್ತಿದ್ದರೆ ಈ ಐಪಿಎಲ್ ಆವೃತ್ತಿಯ ...

news

ಐಪಿಎಲ್ ನಲ್ಲಿ ಆಡುತ್ತಿರುವ ತಮ್ಮ ದೇಶದ ಕ್ರಿಕೆಟಿಗನ ಬಗ್ಗೆ ಅಫ್ಘನ್ ಅಧ್ಯಕ್ಷರಿಂದ ಪ್ರಧಾನಿ ಮೋದಿಗೆ ಖಡಕ್ ಸಂದೇಶ!

ನವದೆಹಲಿ: ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಗೇರಲು ಏಕಾಂಗಿ ವೀರನಂತೆ ಹೋರಾಡಿದವರು ...

news

ಐಪಿಎಲ್: ಕೂದಲೆಳೆಯ ಅಂತರದಲ್ಲಿ ಫೈನಲ್ ಛಾನ್ಸ್ ಕಳೆದುಕೊಂಡ ಕೆಕೆಆರ್

ಕೋಲ್ಕೊತ್ತಾ: ಈ ಐಪಿಎಲ್ ಆವೃತ್ತಿಯ ಮೊದಲ ಪಂದ್ಯದಿಂದಲೂ ಅದ್ಭುತವಾಗಿಯೇ ಆಡಿದ್ದ ಕೋಲ್ಕೊತ್ತಾ ನೈಟ್ ...

news

ವಿರಾಟ್ ಕೊಹ್ಲಿ ಬಗ್ಗೆ ಕೇಳಿದರೆ ಕೋಚ್ ರವಿಶಾಸ್ತ್ರಿಗೆ ಇಷ್ಟೊಂದು ಸಿಟ್ಟು ಬಂದಿದ್ದೇಕೆ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಕೌಂಟಿ ಕ್ರಿಕೆಟ್ ಆಡುವುದರಿಂದ ಹಿಂದೆ ...