ಐಸಿಸಿ ಮುಖ್ಯಸ್ಥ ಸ್ಥಾನ ತ್ಯಜಿಸಿದ ಶಶಾಂಕ್ ಮನೋಹರ್

ದುಬೈ| Krishnaveni K| Last Modified ಗುರುವಾರ, 2 ಜುಲೈ 2020 (10:05 IST)
ದುಬೈ: ಐಸಿಸಿ ಮುಖ್ಯಸ್ಥರಾಗಿದ್ದ ಭಾರತೀಯ ಮೂಲದ ಶಶಾಂಕ್ ಮನೋಹರ್ ತಮ್ಮ ಹುದ್ದೆ ತ್ಯಜಿಸಿದ್ದಾರೆ. ಕೊರೋನಾ ಕಾರಣದಿಂದ ಹೆಚ್ಚುವರಿ ಅವಧಿಗೆ ಅವರನ್ನು ಮುಖ್ಯಸ್ಥರಾಗಿ ಮುಂದುವರಿಸಲಾಗಿತ್ತು.

 

ಇದೀಗ ಅವರ ಅನುಪಸ್ಥಿತಿಯಲ್ಲಿ ಉಪ ಮುಖ್ಯಸ್ಥ ಇಮ್ರಾನ್ ಖವಾಜ ಹಂಗಾಮಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸದ್ಯದಲ್ಲೇ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಬಾರಿ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿವೆ.
ಇದರಲ್ಲಿ ಇನ್ನಷ್ಟು ಓದಿ :