ಕೊಚ್ಚಿ: ತಿರುವನಂತಪುರಂ ಸಂಸದ ಶಶಿ ತರೂರ್ ಮುಂಬರುವ ನವಂಬರ್ ನಲ್ಲಿ ಕೊಚ್ಚಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಸಲುದ್ದೇಶಿಸಿರುವ ಏಕದಿನ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ತರೂರ್ ಟ್ವಿಟರ್ ನಲ್ಲಿ ವಿರೋಧ ವ್ಯಕ್ತಪಡಿಸಿರುವುದಕ್ಕೆ ಹಲವರು ಅವರನ್ನು ಬೆಂಬಲಿಸಿದ್ದಾರೆ. ಈ ವಿರೋಧಕ್ಕೆ ಬಲವಾದ ಕಾರಣವೂ ಇದೆ. ಕೊಚ್ಚಿಯಲ್ಲಿ ಈಗ ಫುಟ್ ಬಾಲ್ ಪಂದ್ಯಕ್ಕೆ ಬೇಕಾದ ಟರ್ಫ್ ಸಿದ್ಧಪಡಿಸಲಾಗಿದೆ. ಈಗ ಕ್ರಿಕೆಟ್ ಪಂದ್ಯ ಆಯೋಜಿಸಬೇಕಾದರೆ ಈ ಮೈದಾನ ಅಗೆದು ಪಿಚ್