ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಆರಂಭವಾಗಿರುವ ಭಾರತ-ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತ ಶಿಖರ್ ಧವನ್ ಬ್ಯಾಟಿಂಗ್ ನೋಡಿದರೆ ಇದೇನು ಟೆಸ್ಟ್ ಪಂದ್ಯವೋ, ಟಿ20 ಪಂದ್ಯವೋ ಎಂದು ಅನುಮಾನ ಮೂಡಿಸುವ ರೀತಿಯಲ್ಲಿತ್ತು.ಪಕ್ಕಾ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದ ಧವನ್, ಮೊದಲ ದಿನದ ಭೋಜನ ವಿರಾಮಕ್ಕೂ ಮೊದಲೇ ಶತಕ ಜಮಾಯಿಸಿದರು. ಕೇವಲ 87 ಎಸೆತಗಳಲ್ಲಿ 18 ಬೌಂಡರಿ, 3 ಸಿಕ್ಸರ್ ಗಳೊಂದಿಗೆ ಭರ್ತಿ 100 ರನ್ ಗಳಿಸಿದರು.ಇದೇ ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ