ದುಬೈ: ಆಯೆಷಾ ಜೊತೆಗಿನ 9 ವರ್ಷಗಳ ದಾಂಪತ್ಯ ಜೀವನ ಮುರಿದುಬಿದ್ದ ಸುದ್ದಿ ಬಳಿಕ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಆಯೆಷಾ ಮೊನ್ನೆಯಷ್ಟೇ ಧವನ್ ರಿಂದ ಪ್ರತ್ಯೇಕವಾಗುತ್ತಿರುವುದರ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಆದರೆ ಧವನ್ ಎಲ್ಲಿಯೂ ಈ ಬಗ್ಗೆ ಬಾಯ್ಬಿಟ್ಟಿಲ್ಲ.ಈ ನಡುವೆ ಐಪಿಎಲ್ ಆಡಲು ಯುಎಇಗೆ ತೆರಳಿರುವ ಧವನ್, ಇನ್ ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಬರೆದಿದ್ದು, ಅವರ ಪ್ರಸಕ್ತ ಪರಿಸ್ಥಿತಿಗೆ ತಕ್ಕ ಸಂದೇಶ