ಟಿ20ಯಲ್ಲಿ ತನ್ನ ಸ್ಥಾನ ಕಿತ್ತುಕೊಂಡ ಕೆಎಲ್ ರಾಹುಲ್ ಗೆ ಶಿಖರ್ ಧವನ್ ಹೇಳಿದ್ದೇನು ಗೊತ್ತಾ?!

ನವದೆಹಲಿ| Krishnaveni K| Last Modified ಗುರುವಾರ, 13 ಫೆಬ್ರವರಿ 2020 (09:28 IST)
ನವದೆಹಲಿ: ಟಿ20 ಕ್ರಿಕೆಟ್ ನಲ್ಲಿ ಶಿಖರ್ ಧವನ್ ಆರಂಭಿಕ ಸ್ಥಾನಕ್ಕೇ ಕುತ್ತು ತಂದಿಟ್ಟಿದ್ದ ಕೆಎಲ್ ರಾಹುಲ್ ಬಗ್ಗೆ ಶಿಖರ್ ಧವನ್ ಹೊಗಳಿಕೆಯ ಮಾತನಾಡಿದ್ದಾರೆ.

 
ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬಂದು ಶತಕ ಗಳಿಸಿದ್ದಲ್ಲದೆ, ಮನೀಶ್ ಪಾಂಡೆ ಜತೆಗೆ ಶತಕದ ಜತೆಯಾಟವಾಡಿದ್ದರು. ಇತ್ತೀಚೆಗೆ ಯಾವುದೇ ಕ್ರಮಾಂಕದಲ್ಲಿ ಆಡಲಿಳಿದರೂ ರಾಹುಲ್ ನಿಯಮಿತವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.
 
ರಾಹುಲ್ ಪ್ರದರ್ಶನದ ಬಗ್ಗೆ ಹೊಗಳಿರುವ ಶಿಖರ್ ಧವನ್ ‘ನೀನು ಬ್ಯಾಟಿಂಗ್ ಮಾಡುವುದನ್ನು ನೋಡಿದರೆ 12 ನೇ ಆಟಗಾರನಾಗಿದ್ದರೂ ಶತಕ ಗಳಿಸುವ ಹಾಗಿದೆ’ ಎಂದು ತಮಾಷೆಯಾಗಿ ಅಭಿನಂದಿಸಿದ್ದಾರೆ. ಈ ಹಿಂದೆಯೇ ಧವನ್ ತಂಡದಲ್ಲಿ ಸ್ಥಾನ ಪಡೆಯುವ ವಿಚಾರವಾಗಿ ತನಗೆ ರಾಹುಲ್ ಜತೆಗೆ ವೈಮನಸ್ಯವಿಲ್ಲ ಎಂದಿದ್ದರು. ಅದನ್ನೀಗ ಮತ್ತೆ ಸಾಬೀತುಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :