ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 22 ವರ್ಷಗಳ ಕಾಲ ಸುದೀರ್ಘ ಕ್ರಿಕೆಟ್ ಆಡಿದ ಆಟಗಾರ. ಅಪ್ಪ ಆಡುತ್ತಿರುವಾಗಲೇ ಕಿರಿಯರ ತಂಡದಲ್ಲಿ ಆಡುತ್ತಿದ್ದ ಪುತ್ರ ಅರ್ಜುನ್ ಸಹ ಅಪ್ಪನ ಜೊತೆ ಆಡಬಹುದು ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ವೆಸ್ಟ್ ಇಂಡೀಸ್ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ವಿಷಯದಲ್ಲಿ ಇದು ಸಾಧ್ಯವಾಗಿದೆ. ನಿವೃತ್ತ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ದೇಸಿ ಕ್ರಿಕೆಟ್`ನ ನ್ನಿಂಗ್ಸ್`ನಲ್ಲಿ ಮಗ ತಗೆನರೈನ್ ಜೊತೆಗೂಡಿ ತಲಾ ಅರ್ಧಶತಕ