ಚೆನ್ನೈ: ಏಕದಿನ ವಿಶ್ವಕಪ್ ಗೆ ಮೊದಲು ಡೆಂಗ್ಯೂ ಜ್ವರಕ್ಕೆ ತುತ್ತಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟಿಗ ಶುಬ್ಮನ್ ಗಿಲ್ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇನ್ ಫಾರ್ಮ್ ಬ್ಯಾಟಿಗನಾಗಿದ್ದ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಿಂದ ಗೈರಾಗಿದ್ದರು. ಅವರ ಪ್ಲ್ಯಾಟ್ ಲೆಟ್ ಕೌಂಟ್ ಕಡಿಮೆಯಿರುವ ಕಾರಣಕ್ಕೆ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ಅವರ ಆರೋಗ್ಯದ ಬಗ್ಗೆ ಅಪ್ ಡೇಟ್ ನೀಡಿರುವ ಬಿಸಿಸಿಐ, ಗಿಲ್ ಸದ್ಯಕ್ಕೆ ತಂಡದ ಜೊತೆ ದೆಹಲಿಗೆ ಪ್ರಯಾಣಿಸಿಲ್ಲ.