ದಿ ಓವಲ್: ಭಾರತ ಮತ್ತುಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ತಾವು ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳುವ ಒಳ್ಳೆ ಗುಣ ನಾಯಕ ವಿರಾಟ್ ಕೊಹ್ಲಿಯಲ್ಲಿದೆ. ಆದರೆ ಕೋಚ್ ರವಿಶಾಸ್ತ್ರಿಗಿಲ್ಲ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಒಬ್ಬ ನಾಯಕನಾಗಿ ಸೋಲಿಗೆ ಹೊಣೆ ಹೊತ್ತುಕೊಳ್ಳುವ ಮೂಲಕ ಕೊಹ್ಲಿ ನಿಜವಾದ ನಾಯಕನ ಗುಣವೇನೆಂದು ತೋರಿಸಿಕೊಟ್ಟಿದ್ದಾರೆ. ಆದರೆ ರವಿಶಾಸ್ತ್ರಿ ಮಾಜಿ ಕ್ರಿಕೆಟಿಗರೊಂದಿಗೆ ಈ ತಂಡದ ಆಟಗಾರರನ್ನು ಹೋಲಿಸುತ್ತಾ ತಮ್ಮ