ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದರೆ ಕ್ರಿಕೆಟಿಗರಿಗೆ ಆಗುವ ಲಾಭವೇನು ಗೊತ್ತಾ?

ಮುಂಬೈ, ಮಂಗಳವಾರ, 15 ಅಕ್ಟೋಬರ್ 2019 (09:12 IST)

ಮುಂಬೈ: ಟೀಂ ಇಂಡಿಯಾವನ್ನು ನಾಯಕರಾಗಿ ಯಶಸ್ವಿಯಾಗಿ ಮುನ್ನಡೆಸಿದ ನಾಯಕ ಸೌರವ್ ಗಂಗೂಲಿ. ಭಾರತ ತಂಡ ವಿದೇಶದಲ್ಲೂ ಗೆಲುವಿನ ರುಚಿ ಕಂಡಿದ್ದೇ ಗಂಗೂಲಿಯಿಂದ ಎಂದರೆ ತಪ್ಪಾಗಲಾರದು.


 
ಅದೇ ಗಂಗೂಲಿ ಈಗ ಕ್ರಿಕೆಟ್ ಆಳುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುಕ್ಕಾಣಿ ಹಿಡಿಯುವ ಹಂತದಲ್ಲಿದ್ದಾರೆ. ಬಿಸಿಸಿಐಗೆ ನೂತನ ಅಧ್ಯಕ್ಷರ ನೇಮಕ ಅಧಿಕೃತವಾಗಿ ಅಕ್ಟೋಬರ್ 23 ರಂದು ಘೋಷಣೆಯಾಗಲಿದ್ದು, ಗಂಗೂಲಿ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿಯುವ ದ್ವಿತೀಯ ಟೀಂ ಇಂಡಿಯಾ ಮಾಜಿ ನಾಯಕ ಎನಿಸಿಕೊಳ್ಳಲಿದ್ದಾರೆ.
 
ಗಂಗೂಲಿ ಸ್ವತಃ ಒಬ್ಬ ಕ್ರಿಕೆಟಿಗರಾಗಿ, ನಾಯಕರಾಗಿ ಅನುಭವ ಹೊಂದಿರುವುದರಿಂದ ಅವರಿಗೆ ಕ್ರಿಕೆಟಿಗರ ಕಷ್ಟ ನಷ್ಟಗಳು, ಚೆನ್ನಾಗಿ ಅರಿವಿರುತ್ತದೆ. ಇದುವರೆಗೆ ಬಿಸಿಸಿಐ ಅಧ್ಯಕ್ಷರಾದವರಲ್ಲಿ ಹೆಚ್ಚಿನವರು ಕಡಿಮೆ ಕ್ರಿಕೆಟ್ ಅನುಭವ ಹೊಂದಿದವರು. ಆದರೆ ಕೇವಲ ಆಡಳಿತಾನುಭವ ಹೆಚ್ಚಿದ್ದವರು. ಆದರೆ ಗಂಗೂಲಿಗೆ ಈಗಾಗಲೇ ಕ್ರಿಕೆಟಿಗನಾಗಿಯೂ ಗೊತ್ತು, ಹಾಗೆಯೇ ಆಡಳಿತಾತ್ಮಕ ವಿಚಾರಗಳು, ಸಮಸ್ಯೆಗಳೂ, ಸವಾಲುಗಳೂ ಚೆನ್ನಾಗಿ ಗೊತ್ತು. ಹೀಗಾಗಿ ಅವರು ಬಿಸಿಸಿಐ ಅಧ್ಯಕ್ಷರಾದರೆ ಅದರಿಂದ ಕ್ರಿಕೆಟ್ ಗೆ ಹೆಚ್ಚಿನ ಲಾಭವಾಗಬಹುದು ಎಂದೇ ಎಲ್ಲರ ಲೆಕ್ಕಾಚಾರ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೊದಲು ರವಿಶಾಸ್ತ್ರಿಯನ್ನು ಕಿತ್ತು ಹಾಕಿ! ನೂತನ ಅಧ್ಯಕ್ಷ ಗಂಗೂಲಿ ಮಾಡಬೇಕಾದ ಕೆಲಸ ಇದುವೇ ಅಂತೆ!

ಮುಂಬೈ: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಬರುತ್ತಲೇ ಟ್ವಿಟರಿಗರು ಖುಷಿ ...

news

ರಿಕಿ ಪಾಂಟಿಂಗ್, ಸ್ಟೀವ್ ವಾರನ್ನೇ ಹಿಂದಿಕ್ಕಲಿರುವ ವಿರಾಟ್ ಕೊಹ್ಲಿ

ಮುಂಬೈ: ನಾಯಕತ್ವದ ವಿಚಾರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ದಿಗ್ಗಜ ನಾಯಕರಾದ ...

news

ತಮಿಳು ಸಿನಿಮಾದಲ್ಲಿ ಬಣ್ಣಹಚ್ಚಲಿರುವ ಹರ್ಭಜನ್ ಸಿಂಗ್

ಚೆನ್ನೈ: ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಲು ಆರಂಭಿಸಿದ ಮೇಲೆ ಪಕ್ಕಾ ತಮಿಳು ...

news

ಅಧ್ಯಕ್ಷರಾಗಿ ನೇಮಕವಾಗುತ್ತಿರುವುದಕ್ಕೆ ಮಮತಾ ಬ್ಯಾನರ್ಜಿಗೆ ಥ್ಯಾಂಕ್ಸ್ ಹೇಳಿದ ಸೌರವ್ ಗಂಗೂಲಿ

ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾಗುತ್ತಿರುವುದಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ...