ಟೀಂ ಇಂಡಿಯಾ ಕ್ರಿಕೆಟಿಗರಿಗೆ ತುಂಬಾ ಭಯವಾಗಿತ್ತು: ಗಂಗೂಲಿ

ಮುಂಬೈ| Krishnaveni K| Last Modified ಸೋಮವಾರ, 13 ಸೆಪ್ಟಂಬರ್ 2021 (16:40 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ನಿಂದ ಹಿಂದೆ ಸರಿದ ಟೀಂ ಇಂಡಿಯಾ ಆಟಗಾರರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ.
 

ಕೊಹ್ಲಿ ಬಳಗ ಅಂತಿಮ ಟೆಸ್ಟ್ ನಿಂದ ಹಿಂದೆ ಸರಿದಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ಆವತ್ತು ಟೀಂ ಇಂಡಿಯಾ ಕ್ರಿಕೆಟಿಗರು ತೀರಾ ಭಯಗೊಂಡಿದ್ದರು ಎಂದಿದ್ದಾರೆ.
 
‘ಕ್ರಿಕೆಟಿಗರು ಆಡಲು ಹಿಂಜರಿದಿದ್ದಕ್ಕೆ ಅವರನ್ನು ಟೀಕಿಸುವಂತಿಲ್ಲ. ಫಿಸಿಯೋ ಯೋಗೇಶ್ ಜೊತೆಗೆ ಆಟಗಾರರು ನಿಕಟ ಸಂಪರ್ಕದಲ್ಲಿದ್ದರು. ನಿತಿನ್ ಪಟೇಲ್ ಐಸೋಲೇಟ್ ಆಗಿದ್ದರು. ಅವರು ತಂಡದ ಸದಸ್ಯರ ಕೊರೋನಾ ಟೆಸ್ಟ್  ಕೂಡಾ ಮಾಡಿದ್ದರು. ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆಯೆಂದಾಗ ಆಟಗಾರರು ಭಯಗೊಂಡಿದ್ದರು.ಹೀಗಿರುವಾಗ ಅವರಿಗೆ ಅಲ್ಲಿರುವುದು ಕಷ್ಟವಾಗಿತ್ತು. ಅವರನ್ನು ಬಲವಂತ ಮಾಡುವುದು ತಪ್ಪಾಗುತ್ತಿತ್ತು’ ಎಂದು ಗಂಗೂಲಿ ಕ್ರಿಕೆಟಿಗರನ್ನು ಸಮರ್ಥಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :