ಕೋಲ್ಕೊತ್ತಾ: ಭಾರತ ಕ್ರಿಕೆಟ್ ತಂಡದ ಯಶಸ್ವೀ ನಾಯಕರೆನಿಸಿಕೊಂಡಿದ್ದ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಜನ್ಮದಿನದ ಸಂಭ್ರಮ.ಗಂಗೂಲಿ ಜನ್ಮದಿನಕ್ಕೆ ಕ್ರಿಕೆಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಷಯಗಳ ಸುರಿಮಳೆಗೈಯುತ್ತಿದ್ದಾರೆ. ಇದು ಗಂಗೂಲಿಗೆ 50 ನೇ ಜನ್ಮದಿನದ ಸಂಭ್ರಮ.2000 ರಲ್ಲಿ ಮ್ಯಾಚ್ ಫಿಕ್ಸಿಂಗ್ ಕಳಂಕ ಹೊತ್ತು ನಿಂತಿದ್ದ ಟೀಂ ಇಂಡಿಯಾಕ್ಕೆ ಹೊಸ ರೂಪ ನೀಡಿ ಯುವ ಆಟಗಾರರನ್ನು ಬೆಳೆಸಿ ತಂಡಕ್ಕೆ ವಿದೇಶದಲ್ಲೂ ಗೆಲುವಿನ ರುಚಿ ಹತ್ತಿಸಿದ ಗಂಗೂಲಿ ಇಂದಿಗೂ ಅನೇಕ ಕ್ರಿಕೆಟಿಗರಿಗೆ ಆದರ್ಶಪ್ರಾಯ.