ಮುಂಬೈ: ಬಿಸಿಸಿಐ ಅಧ್ಯಕ್ಷರಾಗಿ ಅಕ್ಟೋಬರ್ 23 ರಂದು ಅಧಿಕೃತವಾಗಿ ಆಯ್ಕೆಯಾಗಲಿರುವ ಸೌರವ್ ಗಂಗೂಲಿ ಅಧಿಕಾರ ಸ್ವೀಕರಿಸಿದ ಮರುದಿನವೇ ಧೋನಿ ವಿಚಾರ ಇತ್ಯರ್ಥ ಮಾಡುವುದಾಗಿ ಹೇಳಿದ್ದಾರೆ.ಧೋನಿ ಟೀಂ ಇಂಡಿಯಾದಲ್ಲಿ ಮುಂದುವರಿಯಬೇಕೋ ಅಥವಾ ಭವಿಷ್ಯದ ದೃಷ್ಟಿಯಿಂದ ನಿವೃತ್ತಿಯಾಗಬೇಕೋ ಎಂಬ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಧೋನಿ ಮಾತ್ರ ಈ ಬಗ್ಗೆ ತುಟಿ ಪಿಟಕ್ ಎನ್ನದೇ ಸುದೀರ್ಘ ಸಮಯದಿಂದ ತಂಡದಿಂದ ಬಿಡುವು ಪಡೆದಿದ್ದಾರೆ.ಅಕ್ಟೋಬರ್ 24 ಕ್ಕೆ ಆಯ್ಕೆ ಸಮಿತಿ ಸದಸ್ಯರನ್ನು ಭೇಟಿಯಾಗಿ ಧೋನಿ