ಮುಂಬೈ: ಟೀಂ ಇಂಡಿಯಾಗೆ ಆಟಗಾರರ ಆಯ್ಕೆ ವಿಚಾರದಲ್ಲಿ ತಾನು ಕೈ ಹಾಕೋದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.ಆಯ್ಕೆ ಸಮಿತಿ ಸಭೆಯಲ್ಲಿ ಗಂಗೂಲಿ ಉಪಸ್ಥಿತರಿರುತ್ತಾರೆ. ತಂಡಕ್ಕೆ ಆಟಗಾರರ ಆಯ್ಕೆ ವಿಚಾರದಲ್ಲಿ ಅವರು ಪ್ರಭಾವ ಬೀರುತ್ತಾರೆ ಎಂದು ವರದಿಗಳಾಗಿತ್ತು.ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ‘ಇಂತಹ ವರದಿಗಳಿಗೆಲ್ಲಾ ನಾನು ಉತ್ತರಿಸಬೇಕಿಲ್ಲ. ನಾನು ಬಿಸಿಸಿಐ ಅಧ್ಯಕ್ಷ. ನನ್ನ ಕೆಲಸವೇನು ಅಷ್ಟನ್ನು ಮಾತ್ರ ಮಾಡುತ್ತೇನೆ’ ಎಂದಿದ್ದಾರೆ.