ಮುಂಬೈ: ಕೊರೋನಾದಿಂದಾಗಿ ಈ ವರ್ಷ ಭಾರತದಲ್ಲಿ ಸಂಪೂರ್ಣವಾಗಿ ಐಪಿಎಲ್ ಕೂಟ ಆಯೋಜಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂದಿನ ಐಪಿಎಲ್ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.ಮುಂದಿನ ವರ್ಷ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಭಾರತದಲ್ಲೇ ಪಂದ್ಯ ನಡೆಯಬೇಕೆಂಬುದು ಬಿಸಿಸಿಐ ಆಶಯ ಎಂದಿದ್ದಾರೆ.ಐಪಿಎಲ್ 14 ರ ಆರಂಭಿಕ ಪಂದ್ಯಗಳು ಭಾರತದಲ್ಲೇ ಆರಂಭವಾಗಿತ್ತು. ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಮುಂದೂಡಿಕೆಯಾಗಿ ಬಳಿಕ ಯುಎಇನಲ್ಲಿ ಸಮಾಪ್ತಿಯಾಯಿತು.