Widgets Magazine

ನಾನು ಇರೋವರೆಗೂ ಎಲ್ಲರಿಗೂ ಗೌರವ ಸಿಗುತ್ತೆ ಎಂದ ಸೌರವ್ ಗಂಗೂಲಿ

ಮುಂಬೈ| Krishnaveni K| Last Modified ಗುರುವಾರ, 24 ಅಕ್ಟೋಬರ್ 2019 (09:20 IST)
ಮುಂಬೈ: ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮಾಜಿ ನಾಯಕ ಸೌರವ್ ಗಂಗೂಲಿ ಮಾಧ‍್ಯಮಗಳೊಂದಿಗೆ ಮಾತನಾಡಿದ್ದು, ನಾನು ಇರುವವರೆಗೂ ಎಲ್ಲರಿಗೂ ಸಿಗಬೇಕಾದ್ದು ಸಿಗುತ್ತೆ ಎಂದು ಅಭಯ ನೀಡಿದ್ದಾರೆ.

 
ನಾಯಕತ್ವ ಕೆಳಗಿಳಿದ ಬಳಿಕ ಸಾಕಷ್ಟು ಅವಮಾನಕ್ಕೀಡಾಗಿದ್ದ ಗಂಗೂಲಿ ಈಗ ಹಿರಿಯ ಕ್ರಿಕೆಟಿಗರಾಗಿ, ನಿವೃತ್ತಿಯ ಅಂಚಿನಲ್ಲಿರುವವರಿಗೂ ಅವಮಾನವಾಗಲು ಬಿಡಲ್ಲ ಎಂದಿದ್ದಾರೆ.
 
ವಿಶೇಷವಾಗಿ ಧೋನಿ ನಿವೃತ್ತಿ ಬಗ್ಗೆ ಪ್ರಶ್ನೆ ಬಂದಾಗ ಪ್ರತಿಕ್ರಿಯಿಸಿದ ಗಂಗೂಲಿ ‘ಧೋನಿ ಚಾಂಪಿಯನ್ ಆಟಗಾರ. ನಾನು ಇರುವವರೆಗೂ ಯಾರೂ ಅವಮಾನ ಅನುಭವಿಸಲ್ಲ. ಯಾರ ವೃತ್ತಿ ಜೀವನವೂ ಬೇಗನೇ ಕೊನೆಯಾಗಲ್ಲ. ಎಲ್ಲರಿಗೂ ಸಿಗಬೇಕಾದ ಗೌರವ ಸಿಗುತ್ತೆ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :