ಹೊಸ ಪವರ್ ಪ್ಲೇ ನಿಯಮಕ್ಕೆ ಸೌರವ್ ಗಂಗೂಲಿ ಹಸಿರು ನಿಶಾನೆ

ಮುಂಬೈ, ಬುಧವಾರ, 6 ನವೆಂಬರ್ 2019 (09:02 IST)

ಮುಂಬೈ: ಐಪಿಎಲ್ ನಲ್ಲಿ ಹೊಸ ಪವರ್ ಪ್ಲೇ ನಿಯಮ ಅಳವಡಿಸಲು ಐಪಿಎಲ್ ಆಡಳಿತ ಮಂಡಳಿ ಸಲ್ಲಿಸಿರುವ ಪ್ರಸ್ತಾವನೆಗೆ ಅಧ್ಯಕ್ಷ ಸೌರವ್ ಗಂಗೂಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.


 
ಐಪಿಎಲ್ ನಲ್ಲಿ ಕೊನೆಯ ಹಂತದಲ್ಲಿ ವಿಕೆಟ್ ಕಳೆದುಕೊಂಡರೆ ಬೌಲರ್ ನ ಬದಲು ಆಡುವ 11 ರ ಬಳಗದಲ್ಲಿರದ ಬ್ಯಾಟ್ಸ್ ಮನ್ ಒಬ್ಬರಿಗೆ ಆಡುವ ಅವಕಾಶ ನೀಡುವ ಹೊಸ ನಿಯಮವನ್ನು ಜಾರಿಗೊಳಿಸಲು ಐಪಿಎಲ್ ಆಡಳಿತ ಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು.
 
ಈ ನಿಯಮವನ್ನು ದೇಶೀಯ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕೀಗ ಗಂಗೂಲಿ ಕೂಡಾ ಹಸಿರು ನಿಶಾನೆ ತೋರಿದ್ದಾರೆ. ಇದು ಒಂದು ರೀತಿಯಲ್ಲಿ ಹಿಂದೆ ಜಾರಿಯಲ್ಲಿದ್ದ ಸೂಪರ್ ಸಬ್ ಆಟಗಾರನ ನಿಯಮಾಳಿಯಂತೆಯೇ ಇದೆ. ಆ ನಿಯಮವನ್ನು ಬಳಿಕ ಐಸಿಸಿ ಹಿಂಪಡೆದಿತ್ತು. ಇದೀಗ ಐಪಿಎಲ್ ನಲ್ಲೇ ಅಂತಹದ್ದೇ ನಿಯಮವೊಂದು ಜಾರಿಗೆ ತರಲು ಉದ್ದೇಶಿಸಿದ್ದು, ಅದು ಎಷ್ಟರ ಮಟ್ಟಿಗೆ ಯಶಸ್ಸು ಗಳಿಸುತ್ತದೆ ಎಂದು ಕಾದು ನೋಡಬೇಕು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಡಿಸೆಂಬರ್ 19 ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ

ಮುಂಬೈ: ಐಪಿಎಲ್ ನ ಈ ವರ್ಷದ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ...

news

ಈ ವರ್ಷವೂ ಐಪಿಎಲ್ ಓಪನಿಂಗ್ ಕಾರ್ಯಕ್ರಮ ಮಾಡಲ್ಲ ಎಂದ ಬಿಸಿಸಿಐ

ಮುಂಬೈ: ಕಳೆದ ವರ್ಷ ಐಪಿಎಲ್ ಆರಂಭಿಕ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಬಿಸಿಸಿಐ ಅದಕ್ಕೆ ತಗುಲುವ ...

news

ವಿರಾಟ್ ಕೊಹ್ಲಿಗೆ ಬರ್ತ್ ಡೇ ವಿಶ್ ಮಾಡಿ ಟ್ರೋಲ್ ಗೊಳಗಾದ ರವಿಶಾಸ್ತ್ರಿ

ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಏನೇ ಟ್ವೀಟ್ ಮಾಡಲಿ ಟ್ವಿಟರಿಗರು ಮಾತ್ರ ಅವರನ್ನು ಹಿಗ್ಗಾ ...

news

ನಿವೃತ್ತಿ ಘೋಷಿಸುವ ಮೊದಲೇ ಕಾಮೆಂಟರಿ ಮಾಡಲಿರುವ ಧೋನಿ!

ಕೋಲ್ಕೊತ್ತಾ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ನಿವೃತ್ತಿ ಬಗ್ಗೆ ಹಲವು ಮಾತುಗಳು ...