ಅಹಮ್ಮದಾಬಾದ್: ಕೊರೋನಾ ಲಸಿಕೆ ಪಡೆದುಕೊಂಡ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ.ಇದಕ್ಕಾಗಿ ಗಂಗೂಲಿ ಅಹಮ್ಮದಾಬಾದ್ ಗೆ ತೆರಳಿದ್ದಾರೆ. ಇತ್ತೀಚೆಗಷ್ಟೇ ಹೃದಯ ಚಿಕಿತ್ಸೆಗೊಳಗಾಗಿರುವ ಗಂಗೂಲಿ ಕೊರೋನಾ ಲಸಿಕೆ ಪಡೆದುಕೊಂಡ ಮೇಲಷ್ಟೇ ಅಹಮ್ಮದಾಬಾದ್ ಗೆ ತೆರಳುವುದಾಗಿ ಹೇಳಿದ್ದರು. ಅದರಂತೆ ಮೊದಲ ಡೋಸ್ ಕೊರೋನಾ ಲಸಿಕೆ ಪಡೆದುಕೊಂಡ ಗಂಗೂಲಿ ಈಗ ಅಹಮ್ಮದಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಗಂಗೂಲಿ ಇದೇ ಮೊದಲ ಬಾರಿಗೆ