Widgets Magazine

ನುಡಿದಂತೆ ನಡೆಯುತ್ತಾರಾ ಇಂದು ಗಂಗೂಲಿ?! ಇಂದು ಧೋನಿ ಭವಿಷ್ಯ ನಿರ್ಧಾರ?!

ಮುಂಬೈ| Krishnaveni K| Last Modified ಗುರುವಾರ, 24 ಅಕ್ಟೋಬರ್ 2019 (09:04 IST)
ಮುಂಬೈ: ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇಂದು ಧೋನಿ ಭವಿಷ್ಯ ನಿರ್ಧಾರ ಮಾಡುವುದಾಗಿ ಹೇಳಿದ್ದರು. ನುಡಿದಂತೆ ನಡೆಯುತ್ತಾರಾ ದಾದಾ ಎನ್ನುವುದು ಸದ್ಯದ ಕುತೂಹಲ.

 
ಧೋನಿ ನಿವೃತ್ತಿ ಬಗ್ಗೆ ಅವರ ಬಳಿ ಮತ್ತು ಟೀಂ ಇಂಡಿಯಾ ನಾಯಕ ಕೊಹ್ಲಿ, ಆಯ್ಕೆಗಾರರ ಜತೆ ಅಕ್ಟೋಬರ್ 24 ರಂದು ಚರ್ಚೆ ಮಾಡುವುದಾಗಿ ಗಂಗೂಲಿ ಹೇಳಿದ್ದರು. ಗಂಗೂಲಿ ಹೇಳಿದಂತೆ ಮಾಡಿದರೆ ಇಂದು ಧೋನಿ ಭವಿಷ್ಯದ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಸಾಧ‍್ಯತೆಯಿದೆ.
 
ಮೊನ್ನೆಯಷ್ಟೇ ಧೋನಿ ಬಗ್ಗೆ ಗಂಗೂಲಿ ನಿಮ್ಮ ಜತೆ ಚರ್ಚಿಸಿದ್ದಾರಾ ಎಂದು ನಾಯಕ ಕೊಹ್ಲಿಯನ್ನು ಕೇಳಿದಾಗ ಇನ್ನೂ ಮಾತನಾಡಿಲ್ಲವೆಂದಿದ್ದರು. ಇಂದು ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಇದರಲ್ಲಿ ಇನ್ನಷ್ಟು ಓದಿ :