Widgets Magazine

ಬಿಸಿಸಿಐ ಅಧ್ಯಕ್ಷರಾಗಿ ಇಂದು ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ

ಮುಂಬೈ| Krishnaveni K| Last Modified ಬುಧವಾರ, 23 ಅಕ್ಟೋಬರ್ 2019 (09:43 IST)
ಮುಂಬೈ: ಹಲವು ದಿನಗಳ ನಂತರ ಭಾರತೀಯ ಕ್ರಿಕೆಟ್ ಮಂಡಳಿಗೆ ಅಧ‍್ಯಕ್ಷರ ನೇಮಕವಾಗುತ್ತಿದೆ. ಇಂದು ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
 

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಹಲವು ದಿನಗಳಿಂದ ಬಿಸಿಸಿಐಯಲ್ಲಿ ಸಿಒಎ ಪರಮಾಧಿಕಾರ ಹೊಂದಿದ್ದರು. ಇದೀಗ ಸಿಇಒ ಅಧಿಕಾರಕ್ಕೆ ಕತ್ತರಿ ಬೀಳಲಿದ್ದು, ಗಂಗೂಲಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಾರೆ.
 
ಗಂಗೂಲಿ ಅಧ್ಯಕ್ಷರಾದ ಬೆನ್ನಲ್ಲೇ ಆಡಳಿತಾಧಿಕಾರಿಗಳು ತಮ್ಮ ಸ್ಥಾನ ತೆರವುಗೊಳಿಸಲಿದ್ದಾರೆ. ಆದರೆ ವಿನೋದ್ ರಾಯ್ ನೇತೃತ್ವದ ಆಡಳಿತಾಧಿಕಾರಿ ಕೈಗೊಂಡಿದ್ದ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ತರುವಂತಿಲ್ಲ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಇದರಲ್ಲಿ ಇನ್ನಷ್ಟು ಓದಿ :