ಮುಂಬೈ: ಟೀಂ ಇಂಡಿಯಾದಲ್ಲಿ ಐಪಿಎಲ್ ನ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಗೆ ವಿಶೇಷ ಕೋಟಾದಡಿಯಲ್ಲಿ ಸ್ಥಾನ ಸಿಗುತ್ತಿದೆ ಎಂದು ಟ್ವಿಟರಿಗರು ಟೀಕೆ ಮಾಡಿದ್ದಾರೆ. ಟೀಂ ಇಂಡಿಯಾದಿಂದ ಯುವರಾಜ್ ಸಿಂಗ್ ಗೆ ಕೊಕ್ ನೀಡಿರುವುದನ್ನು ಪ್ರಶ್ನಿಸಿರುವ ಟ್ವಿಟರ್ ಅಭಿಮಾನಿಗಳು ಇಂತಹದ್ದೊಂದು ಆರೋಪ ಮಾಡಿದ್ದಾರೆ.ಯುವರಾಜ್ ಮಾತ್ರವಲ್ಲದೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾಗೆ ವಿಶ್ರಾಂತಿಯ ನೆಪವೊಡ್ಡಿ ತಂಡದಿಂದ ಹೊರಗಿಟ್ಟಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇವರ ಬದಲಿಗೆ ಆರ್ ಸಿಬಿ