ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್: ಪ್ರಕರಣ ಬೆಳಕಿಗೆ ಬಂದಿದ್ದು ಆ ಒಂದು ಸಾವಿನಿಂದ!

ಚೆನ್ನೈ, ಮಂಗಳವಾರ, 17 ಸೆಪ್ಟಂಬರ್ 2019 (10:24 IST)

ಚೆನ್ನೈ: ಐಪಿಎಲ್ ಬಳಿಕ ಇದೀಗ ತಮಿಳುನಾಡು ಟಿ20 ಪ್ರೀಮಿಯರ್ ಲೀಗ್ ನಲ್ಲೂ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ವರದಿ ಬಂದಿದೆ. ಈ ಬಗ್ಗೆ ಇದೀಗ ಬಿಸಿಸಿಐ ತನಿಖೆಗೆ ಮುಂದಾಗಿದೆ.


 
ತಮಿಳುನಾಡು ರಾಜ್ಯ ಪ್ರೀಮಿಯರ್ ಲೀಗ್ ನಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುವ ರವಿಚಂದ್ರನ್ ಅಶ್ವಿನ್, ಅಭಿನವ್ ಮುಕುಂದ್ ಅವರಂತಹ ಆಟಗಾರರೂ ಪಾಲ್ಗೊಂಡಿದ್ದರು.
 
ಈ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಇದೀಗ ಅನಾಮಧೇಯ ವ್ಯಕ್ತಿಯೊಬ್ಬ ಕ್ರಿಕೆಟಿಗರಿಗೆ ವ್ಯಾಟ್ಸಪ್ ಸಂದೇಶ ನೀಡಿ ಆಮಿಷವೊಡ್ಡಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಪಡೆ ತನಿಖೆಗೆ ಮುಂದಾಗಿದೆ. ಇದರಲ್ಲಿ ಹಲವು ರಣಜಿ ಕ್ರಿಕೆಟಿಗರು, ಕೋಚ್ ಗಳೂ ಭಾಗಿಯಾಗಿದ್ದಾರೆ ಎಂಬ ಗುಮಾನಿ ಬಂದಿದೆ.
 
ಅಷ್ಟಕ್ಕೂ ಈ ಪ್ರಕರಣ ಬೆಳಕಿಗೆ ಬರಲು ಕಾರಣ ಒಂದು ಫ್ರಾಂಚೈಸಿ ಮಾಲಿಕ ವಿಬಿ ಚಂದ್ರಶೇಖರ್ ಎಂಬವರು ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಪ್ರಕರಣದ ಬಳಿಕ ಪೊಲೀಸರು ಎಚ್ಚೆತ್ತುಕೊಂಡು ತನಿಖೆ ನಡೆಸಿದಾಗ ಈ ಸ್ಪಾಟ್ ಫಿಕ್ಸಿಂಗ್ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಇಂದಿನಿಂದ ಚೀನಾ ಓಪನ್: ಸಿಂಧು, ಸೈನಾ ಮೇಲೆ ಎಲ್ಲರ ಕಣ್ಣು

ನವದೆಹಲಿ: ಇಂದಿನಿಂದ ಪ್ರತಿಷ್ಠಿತ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಲಿದ್ದು, ಭಾರತದ ಪಿವಿ ...

news

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭದ್ರತೆ ಕೊಡಲು ನಿರಾಕರಿಸಿದ ಚಂಢೀಘಢ ಪೊಲೀಸರು! ಕಾರಣವೇನು ಗೊತ್ತಾ?

ಮೊಹಾಲಿ: ದ.ಆಫ್ರಿಕಾ ವಿರುದ್ಧ ದ್ವಿತೀಯ ಟಿ20 ಪಂದ್ಯವಾಡಲು ಚಂಡೀಘಡಕ್ಕೆ ಬಂದಿಳಿದಿರುವ ಟೀಂ ಇಂಡಿಯಾ ...

news

ಐಸಿಸಿ ಟೆಸ್ಟ್ ಶ್ರೇಯಾಂಕ: ಕೊಹ್ಲಿಗೆ ಎರಡನೇ ಸ್ಥಾನವೇ ಗತಿ

ದುಬೈ: ಐಸಿಸಿ ಲೇಟೆಸ್ಟ್ ಟೆಸ್ಟ್ ಶ್ರೇಯಾಂಕ ಬಿಡುಗಡೆ ಮಾಡಿದ್ದು, ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಟೀಂ ...

news

ವಿರಾಟ್ ಕೊಹ್ಲಿ ಎದೆ ಮೇಲೆ ಅನುಷ್ಕಾ ಶರ್ಮಾ ಹೆಸರು! ವೈರಲ್ ಆಯ್ತು ಫೋಟೋ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸುವ ...