ಲೀಸೆಸ್ಟರ್: ಲೀಸೆಸ್ಟರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಬ್ಯಾಟಿಗ ಶ್ರೀಕರ್ ಭರತ್ ದ್ವಿತೀಯ ಇನಿಂಗ್ಸ್ ನಲ್ಲೂ ಮಿಂಚಿದ್ದು ಆರಂಭಿಕರಾಗಿ ಕಣಕ್ಕಿಳಿದು 43 ರನ್ ಗಳಿಸಿದ್ದಾರೆ.ದ್ವಿತೀಯ ಇನಿಂಗ್ಸ್ ನಲ್ಲಿ ಭಾರತದ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಬ್ಯಾಟಿಂಗ್ ಗಿಳಿಯಲಿಲ್ಲ. ಬದಲಾಗಿ ಭರತ್-ಶುಬ್ನಂ ಗಿಲ್ ಆರಂಭಿಕರಾಗಿ ಕಣಕ್ಕಿಳಿದರು. ಈ ನಡುವೆ ಶುಬ್ನಂ ಗಿಲ್ 38 ರನ್ ಗಳಿಸಿ ಔಟಾದರು. ಬಳಿಕ ಬಂದ ಹನುಮ ವಿಹಾರಿ 20