ದೆಹಲಿ: ನಿನ್ನೆ ಫೀಲ್ಡಿಂಗ್ ಮಾಡುವಾಗ ದೆಹಲಿ ಮೈದಾನದಲ್ಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಆಕ್ಷೇಪ ಎತ್ತಿ ಪಂದ್ಯವನ್ನೇ ಸ್ಥಗಿತಗೊಳಿಸಿದ್ದ ಲಂಕಾ ಕ್ರಿಕೆಟ್ ತಂಡ ಇಂದು ಬ್ಯಾಟಿಂಗ್ ಮಾಡುವಾಗ ಸೊಲ್ಲೆತ್ತದೇ ದಿನದಾಟ ಮುಗಿಸಿದೆ. ದಿನದಂತ್ಯಕ್ಕೆ ಲಂಕಾ 9 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದ್ದು, ನಾಯಕ ಚಂಡಿಮಾಲ್ 147 ರನ್ ಗಳೊಂದಿಗೆ ಅಜೇಯರಾಗುಳಿದಿದ್ದಾರೆ. ಹಾಗಿದ್ದರೂ ಇನ್ನೂ 180 ರನ್ ಹಿನ್ನಡೆಯಲ್ಲಿದ್ದಾರೆ.ಅದೇನೇ ಇದ್ದರೂ ಇಂದು ಮೊದಲ ಅವಧಿಯನ್ನು ಚೆನ್ನಾಗಿಯೇ ನಿಭಾಯಿಸಿದ್ದ ಲಂಕಾ ಬ್ಯಾಟ್ಸ್