ದೆಹಲಿ: ವಾಯು ಮಾಲಿನ್ಯದಿಂದಾಗಿ ಶ್ರೀಲಂಕಾ ಆಟಗಾರರು ಪದೇ ಪದೇ ಆಟ ನಿಲ್ಲಿಸಿದಾಗ ಅಸಹನೆಗೊಂಡು 537 ಕ್ಕೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಟೀಂ ಇಂಡಿಯಾ ತಪ್ಪು ಮಾಡಿತಾ?! ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ಪ್ರಥಮ ಇನಿಂಗ್ಸ್ ನಲ್ಲಿ ಶ್ರೀಲಂಕಾ ಇಂದು ದಿನವಿಡೀ ವಿಕೆಟ್ ಕಳೆದುಕೊಳ್ಳದೇ ಭೋಜನ ವಿರಾಮದವರೆಗೆ ಯಶಸ್ವಿಯಾಗಿ ಇನಿಂಗ್ಸ್ ಕಟ್ಟುತ್ತಿರುವುದನ್ನು ನೋಡಿದರೆ ಇಂತಹದ್ದೊಂದು ಪ್ರಶ್ನೆ ಏಳುವುದು ಸಹಜ.ಭೋಜನ ವಿರಾಮದ ವೇಳೆಗೆ 3 ವಿಕೆಟ್ ನಷ್ಟಕ್ಕೆ ಲಂಕಾ 192