ಶ್ರೀಲಂಕಾ ಕ್ರಿಕೆಟ್ ತಂಡ ಪಾಕ್ ಪ್ರವಾಸ: ನಾವು ಬರೋದಿಲ್ಲ ಎಂದ 10 ಕ್ರಿಕೆಟಿಗರು

ಕೊಲೊಂಬೋ| Krishnaveni K| Last Modified ಮಂಗಳವಾರ, 10 ಸೆಪ್ಟಂಬರ್ 2019 (10:18 IST)
ಕೊಲೊಂಬೋ: ಶ್ರೀಲಂಕಾ ಕ್ರಿಕೆಟ್ ತಂಡ ಮತ್ತೆ ಪಾಕಿಸ್ತಾನ ಪ್ರವಾಸ ಮಾಡಲು ಹೊರಟಿದೆ. ಆದರೆ 10 ಕ್ರಿಕೆಟಿಗರು ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

 

ಶ್ರೀಲಂಕಾ ಈ ಮೊದಲು 2009 ರಲ್ಲಿ ಪಾಕ್ ಪ್ರವಾಸ ಮಾಡಿದ್ದಾಗ ಉಗ್ರರ ದಾಳಿ ನಡೆದು ಕೆಲವು ಕ್ರಿಕೆಟಿಗರಿಗೆ ಗಾಯವಾಗಿತ್ತು. ಇದಾದ ಬಳಿಕ ವಿಶ್ವದ ಯಾವುದೇ ತಂಡವೂ ಪಾಕ್ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದೆ.
 
ಇದೀಗ ಮತ್ತೆ ಲಂಕಾ ತಂಡ ಪಾಕ್ ಪ್ರವಾಸ ಮಾಡಲು ಹೊರಟಿದೆ. ಆದರೆ ಪಾಕ್ ಪ್ರವಾಸ ಮಾಡುವ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಲಂಕಾ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ನೀಡಿದೆ. ಹೀಗಾಗಿ ಲಸಿತ್ ಮಾಲಿಂಗ, ಮ್ಯಾಥ್ಯೂಸ್ ಅವರನ್ನು ಒಳಗೊಂಡಂತೆ 10 ಕ್ರಿಕೆಟಿಗರು ಪಾಕ್ ಗೆ ತೆರಳದೇ ಇರಲು ನಿರ್ಧರಿಸಿದ್ದಾರೆ.
 
ಹಾಗಿದ್ದರೂ ಯಾವ ಕ್ರಿಕೆಟಿಗರು ಬರಲಿ, ಬಿಡಲಿ ಲಂಕಾ ಪಾಕ್ ಪ್ರವಾಸ ಮಾಡಲಿರುವುದು ನಿಜ. ಕ್ರಿಕೆಟ್ ಸರಣಿ ನಡೆಯುವುದೂ ನಿಜ ಎಂದು ಪಾಕ್ ಕ್ರಿಕೆಟ್ ಮಂಡಳಿ ಹೇಳಿದೆ.
ಇದರಲ್ಲಿ ಇನ್ನಷ್ಟು ಓದಿ :