Widgets Magazine

ಟೀಂ ಇಂಡಿಯಾ ಕೋಚ್ ಆಗಲು ಆಸಕ್ತಿ ವಹಿಸಿದ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ

ಮುಂಬೈ| Krishnaveni K| Last Modified ಮಂಗಳವಾರ, 23 ಜುಲೈ 2019 (09:43 IST)
ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಹಲವರು ಕೋಚ್ ಆಗಲು ಆಸಕ್ತಿ ವಹಿಸುತ್ತಿದ್ದಾರೆ.

 
ಮೂಲಗಳ ಪ್ರಕಾರ ಇದೀಗ ಶ್ರೀಲಂಕಾ ಮಾಜಿ ನಾಯಕ ಮಹೇಲಾ ಜಯವರ್ಧನೆ ಕೂಡಾ ಆಕಾಂಕ್ಷಿಗಳಲ್ಲಿ ಒಬ್ಬರು ಎನ್ನಲಾಗಿದೆ. ಟೀಂ ಇಂಡಿಯಾಗೆ ಕೋಚ್ ಆಗಲು ಮಹೇಲಾ ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಐಪಿಎಲ್ ನಲ್ಲಿ ಕೋಚ್ ಆಗಿ ಯಶಸ್ವಿಯಾಗಿರುವ ಮಹೇಲಾಗೆ ಈಗ ಭಾರತದ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗುವ ಆಕಾಂಕ್ಷೆಯಿದೆ ಎನ್ನಲಾಗಿದೆ.
 
ಕಪಿಲ್ ದೇವ್ ನೇತೃತ್ವದ ಸಲಹಾ ಸಮಿತಿ ಕೋಚ್ ಆಯ್ಕೆ ನಡೆಸಲಿದ್ದು, ಮಹೇಲಾ ಅಧಿಕೃತವಾಗಿ ಅರ್ಜಿ ಸಲ್ಲಿಸಿದರೆ ಅವರ ಹೆಸರೂ ಪರಿಗಣನೆಗೆ ಬರಬಹುದು.
ಇದರಲ್ಲಿ ಇನ್ನಷ್ಟು ಓದಿ :