ಮುಂಬೈ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಪ್ರಕರಣದಿಂದಾಗಿ ಎಂದೋ ನಡೆಯಬೇಕಿದ್ದ ಐಪಿಎಲ್ 13 ನೇ ಆವೃತ್ತಿ ಇನ್ನೂ ಆಯೋಜಿಸಲು ಬಿಸಿಸಿಐಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿತ್ತು.ಹಾಗಂತ ಈ ಬಾರಿಯ ಕೂಟವನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ 4 ಸಾವಿರ ಕೋಟಿ ರೂ. ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗಾಗಲೇ ಹೇಳಿದ್ದಾರೆ.ಹೀಗಾಗಿ ಆ ನಷ್ಟವಾಗದಂತೆ ನೋಡಿಕೊಳ್ಳಲು ಬಿಸಿಸಿಐ ವಿದೇಶ ತಾಣದಲ್ಲಿಯಾದರೂ ಸರಿಯೇ ಐಪಿಎಲ್ ನಡೆಸಲು ಯೋಜನೆ ನಡೆಸಿದೆ. ಸದ್ಯದ ಪರಿಸ್ಥಿತಿಯಲ್ಲಿ