ನಾಗ್ಪುರ: ಟೀಂ ಇಂಡಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಶ್ರೀಲಂಕಾ ತಿಣುಕಾಡುತ್ತಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ನಾಲ್ಕನೇ ದಿನದ ಊಟದ ವಿರಾಮದ ವೇಳೆಗೆ ಲಂಕಾ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಒದ್ದಾಡುತ್ತಿದೆ. ನಾಯಕ ಚಂಡಿಮಾಲ್ 53 ರನ್ ಗಳಿಸಿ ಏಕಮಾತ್ರ ಭರವಸೆಯಾಗಿ ಉಳಿದಿದ್ದಾರೆ. ಹಾಗಿದ್ದರೂ ಇನ್ನೂ 260 ರನ್ ಹಿನ್ನಡೆ ಇರುವುದರಿಂದ ಸೋಲು ತಪ್ಪಿಸಿಕೊಳ್ಳುವುದು ತೀರಾ ಕಷ್ಟದ ಕೆಲಸವಾಗಿ ಉಳಿದಿದೆ.ಭಾರತದ ಪರ