ಟೀಂ ಇಂಡಿಯಾ ವಿರುದ್ಧ ಸರಣಿ ಸಮಬಲ ಮಾಡಿಕೊಂಡ ಶ್ರೀಲಂಕಾ

ಕೊಲೊಂಬೋ| Krishnaveni K| Last Modified ಗುರುವಾರ, 29 ಜುಲೈ 2021 (09:05 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ನಿನ್ನೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್ ಗಳ ಗೆಲುವಿನೊಂದಿಗೆ ಸರಣಿ ಸಮಬಲಗೊಳಿಸಿದೆ.
Photo Courtesy: Google

 
ಕೊರೋನಾ ಪೀಡಿತ ಕೃನಾಲ್ ಪಾಂಡ್ಯ ಸಮೀಪವರ್ತಿ ಆಟಗಾರರು ನಿನ್ನೆಯ ಪಂದ್ಯಗಳಲ್ಲಿ ಆಡಿರಲಿಲ್ಲ. ಹೀಗಾಗಿ ಭಾರತ ತಂಡಕ್ಕೆ ಪ್ರಮುಖ ಆಟಗಾರರ ಸೇವೆ ಅಲಭ್ಯವಾಗಿತ್ತು. ಇದರಿಂದಾಗಿ ಪೃಥ್ವಿ ಶಾ ಜಾಗದಲ್ಲಿ ದೇವದತ್ತ್ ಪಡಿಕ್ಕಲ್, ಸೂರ್ಯಕುಮಾರ್ ಬದಲಿಗೆ ಋತುರಾಜ್ ಗಾಯಕ್ ವಾಡ್, ಇಶಾನ್ ಕಿಶನ್ ಬದಲಿಯಾಗಿ ನಿತೀಶ್ ರಾಣಾ ಸ್ಥಾನ ಪಡೆದಿದ್ದರು.
 
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಂಕಾ 19.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿ ಇದೀಗ 1-1 ರಿಂದ ಸಮಬಲಗೊಂಡಿದೆ. ಅಂತಿಮ ಪಂದ್ಯ ಇಂದು ನಡೆಯಲಿದೆ.
ಇದರಲ್ಲಿ ಇನ್ನಷ್ಟು ಓದಿ :