Widgets Magazine

ವಿಶ್ವಕಪ್ ಫೈನಲ್ ನಲ್ಲಿ ಭಾರತವಿಲ್ಲದೇ ದುಬಾರಿ ಮೊತ್ತದ ಹಣ ಕಳೆದುಕೊಂಡ ಸ್ಟಾರ್ ಸ್ಪೋರ್ಟ್ಸ್

ಲಂಡನ್| Krishnaveni K| Last Modified ಸೋಮವಾರ, 15 ಜುಲೈ 2019 (09:40 IST)
ಲಂಡನ್: ನಿರೀಕ್ಷೆಯಂತೆ ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಗೆ ಬಾರದೇ ಇದ್ದ ಕಾರಣ, ಅಧಿಕೃತ ನೇರ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಅಂದಾಜು 15 ಕೋಟಿ ರೂ. ನಷ್ಟ ಅನುಭವಿಸಿದೆ ಎನ್ನಲಾಗಿದೆ.

 
ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಜಾಸ್ತಿ. ಟೀಂ ಇಂಡಿಯಾ ಆಡುವ ಆಟಕ್ಕೆ ಜಾಹೀರಾತುದಾರರು ಮುಗಿಬೀಳುತ್ತಾರೆ. ಪ್ರೈಮ್ ಟೈಮ್ ಜಾಹೀರಾತಿಗೆ 10 ಸೆಕೆಂಡ್ ಗೆ 25-30 ಲಕ್ಷ ರೂ. ಬೆಲೆ ನಿಗದಿಯಾಗುತ್ತದೆ.
 
ಆದರೆ ಭಾರತವಿಲ್ಲದ ಕಾರಣ ಈ ಜಾಹೀರಾತು ಬೆಲೆ 15-17 ಲಕ್ಷ ರೂ. ಗೆ ಬಂದು ನಿಂತಿದೆ. ಇದರಿಂದಾಗಿ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಅಂದಾಜು 15 ಕೋಟಿ ನಷ್ಟ ಅನುಭವಿಸಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :