ಮುಂಬೈ: ಮಾಜಿ ಅಂಪಾಯರ್ ಸ್ಟೀವ್ ಬಕ್ನರ್ ಎಂದರೆ ಭಾರತೀಯ ಅಭಿಮಾನಿಗಳಿಗೆ ಆಕ್ರೋಶವಿತ್ತು. ಇದಕ್ಕೆ ಕಾರಣ ಅವರು ಭಾರತೀಯ ಆಟಗಾರರಿಗೆ ಅದರಲ್ಲೂ ವಿಶೇಷವಾಗಿ ಸಚಿನ್ ತೆಂಡುಲ್ಕ್ ಗೆ ಹಲವು ಬಾರಿ ನಾಟೌಟ್ ಆಗಿದ್ದರೂ ಔಟ್ ಎಂದು ವಿವಾದಾತ್ಮಕ ತೀರ್ಪು ನೀಡುತ್ತಿದ್ದುದು. ಆದರೆ ಬಕ್ನರ್ ಇದೀಗ ಅಂದು ಮಾಡಿದ ತಪ್ಪನ್ನು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಗೆ ನಾನು ಎರಡು ಬಾರಿ ತಪ್ಪಾಗಿ ಔಟ್ ತೀರ್ಪು ನೀಡಿದ್ದೆ ಎಂದಿದ್ದಾರೆ.ಒಮ್ಮೆ ಆಸ್ಟ್ರೇಲಿಯಾದಲ್ಲಿ, ಇನ್ನೊಮ್ಮೆ ಭಾರತದಲ್ಲೇ