ಸಿಡ್ನಿ: ಚೆಂಡು ವಿರೂಪ ಪ್ರಕರಣದಿಂದ ಇದುವರೆಗೆ ಗಳಿಸಿದ ಗೌರವ ಕಳೆದುಕೊಂಡ ಭಾವದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಕ್ಷಮೆ ಕೇಳುತ್ತಾ ಗಳ ಗಳನೆ ಅತ್ತು ಬಿಟ್ಟಿದ್ದಾರೆ.ಜೊಹಾನ್ಸ್ ಬರ್ಗ್ ನಿಂದ ಸಿಡ್ನಿಗೆ ಬಂದಿಳಿದ ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಅಷ್ಟೇ ಅಲ್ಲ, ಇದು ತನ್ನ ನಾಯಕತ್ವದ ದೊಡ್ಡ ವೈಫಲ್ಯ ಎಂದು ಪಶ್ಚಾತ್ತಾಪದ ಶಬ್ಧ ಹೇಳಿದ್ದಾರೆ.ನಿಜವಾಗಲೂ ನನಗೆ ಅತೀವ ದುಃಖವಾಗುತ್ತಿದೆ.ನನ್ನ ತಪ್ಪು ಸರಿ ಮಾಡುವಂತಹ ಯಾವುದೇ ದಾರಿಯಿದ್ದರೂ