ಮುಂಬೈ: ನಮ್ಮಂತಹ ಸಣ್ಣ ರಾಜ್ಯಗಳ ಆಟಗಾರರು ನಿಮಗೆ ಕಾಣಿಸಲ್ವೇ? ರಣಜಿ ಟ್ರೋಫಿಯಲ್ಲಿ ಫೈನಲ್ ವರೆಗೆ ಆಡಿದರೂ ಆ ಪರ್ಫಾಮೆನ್ಸ್ ಆಧಾರದಲ್ಲಿ ಅವಕಾಶ ಕೊಡಲ್ಲ ಯಾಕೆ? ಹೀಗಂತ ಸೌರಾಷ್ಟ್ರ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಶೆಲ್ಡನ್ ಜ್ಯಾಕ್ಸನ್ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.