ಮುಂಬೈ: ಪತ್ನಿ ಅನುಷ್ಕಾ ಶರ್ಮಾ ಹೆರಿಗೆ ಸಮಯದಲ್ಲಿ ಆಕೆಯ ಜತೆಗಿರಲು ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಗೆ ಮನವಿ ಮಾಡಿದ್ದರು. ಅದನ್ನು ಬಿಸಿಸಿಐ ಪುರಸ್ಕರಿಸಿದೆ ಕೂಡಾ. ಆದರೆ ಹಿಂದೊಮ್ಮೆ ಸುನಿಲ್ ಗವಾಸ್ಕರ್ ಗೆ ಈ ರೀತಿ ಬಿಸಿಸಿಐ ವಿನಾಯಿತಿ ನೀಡಿರಲಿಲ್ಲ. 1976 ರಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸದಲ್ಲಿತ್ತು. ಆಗ ಗವಾಸ್ಕರ್ ಪತ್ನಿ ಪುತ್ರನಿಗೆ ಜನ್ಮ ನೀಡಿದ್ದರು. ಆ ಸಂದರ್ಭದಲ್ಲಿ ಗವಾಸ್ಕರ್ ತವರಿಗೆ ಮರಳಿ ಮಗನನ್ನು ನೋಡಲು ಬಿಸಿಸಿಐ ಅನುಮತಿ ಕೇಳಿದ್ದರು.