ಮುಂಬೈ: ಐಸಿಸಿ ಟ್ರೋಫಿಗಳಲ್ಲಿ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾನೇ ಸೂಕ್ತ ನಾಯಕ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.ವಿರಾಟ್ ಕೊಹ್ಲಿ ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಸಿಸಿಐ ಹೊಸ ನಾಯಕನ ಹುಡುಕಾಟ ನಡೆಸಿದೆ. ರೋಹಿತ್ ಶರ್ಮಾರೇ ಮುಂದಿನ ನಾಯಕರಾಗುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಗವಾಸ್ಕರ್ ಈ ಹೇಳಿಕೆ ನೀಡಿದ್ದಾರೆ.‘ಮುಂದಿನ ಏಕದಿನ ವಿಶ್ವಕಪ್ ಆರಂಭವಾಗಲು ಇನ್ನು 12-13 ತಿಂಗಳು ಬಾಕಿಯಿದೆಯಷ್ಟೇ. ರೋಹಿತ್ ನಾಯಕರಾಗಿ ಮಾಡಿರುವ ದಾಖಲೆಗಳನ್ನು ಗಮನಿಸಿದರೆ